Times of Deenabandhu
ಕ್ರೈಮ್ ಮುಖ್ಯಾಂಶಗಳು ರಾಜ್ಯ

ಕಂಟೇನರ್ ಗೆ ಕಾರು ಡಿಕ್ಕಿ: ನಾಲ್ವರು ಸ್ಥಳದಲ್ಲೇ ದುರ್ಮರಣ….

ಹಾಸನ:  ಕಂಟೇನರ್ ಗೆ ಕಾರ್ ಡಿಕ್ಕಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಚನ್ನರಾಯಪಟ್ಟಣದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ದುರ್ಘಟನೆ ಸಂಭವಿಸಿದೆ.  ಕಾರಿನಲ್ಲಿದ್ದ ಮಂಜುನಾಥ್, ಚೇತನ್, ವಿಕ್ರಂ, ಅಭಿಷೇಕ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತ ನಾಲ್ವರು ಬೆಂಗಳೂರು ಮೂಲದವರಾಗಿದ್ದಾರೆ.

ಈ ಮದ್ಯೆ ನಾಲ್ವರು ಸ್ನೇಹಿತರು  ಬೆಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ತೆರಳುತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಮಂಗಳೂರಿನತ್ತ ಹೊರಟಿದ್ದ ಕಂಟೇನರ್ ಗೆ ಹಿಂಬದಿಯಿಂದ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಚನ್ನರಾಯಪಟ್ಟಣ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related posts

ಬಿಜೆಪಿ ಅಂದ್ರೆ ‘ಬ್ಲಾಕ್ ಮೇಲರ್ಸ್ ಜನತಾ ಪಾರ್ಟಿ”- ಡಿ.ಕೆ.ಶಿವಕುಮಾರ್ ವ್ಯಂಗ್ಯ

Times fo Deenabandhu

ಸ್ಯಾನಿಟೈಸರ್ ಸೂಪರ್ ವೈಸರ್‍ ಗಳು ಕರ್ತವ್ಯದಿಂದ ಬಿಡುಗಡೆ….

Times fo Deenabandhu

ರೈತರಿಗೆ ಸಿಹಿಸುದ್ದಿ ನೀಡಿದ ಪ್ರಧಾನಿ ಮೋದಿ: ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹಣ ರೈತರ ಖಾತೆಗೆ…

Times fo Deenabandhu